K E A 2026- ಕೆ ಇ ಎ ಜನವರಿ 25 ರಂದು ನಡೆಸಿದ ಪರೀಕ್ಷೆಗಳ ಕೀ ಉತ್ತರ ಪ್ರಕಟ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊರಡಿಸಿದ ವಿವಿಧ ನಿಗಮ/ಸಂಸ್ಥೆ/ಮಂಡಳಿ/ಇಲಾಖೆಗಳ ಉಳಿಕೆ ಮೂಲ ವೃಂದದ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (K E A) 25-ಜನವರಿ-2026 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳ 27-ಜನವರಿ-2026 ರಂದು ಪ್ರಕಟಿಸಿದೆ.
K E A 2026-ಆಕ್ಷೇಪಣೆಗೆ ಸಲ್ಲಿಸಲು
ಪ್ರಕಟಿಸಿದ ಕೀ ಉತ್ತರಗಳಿಗೆ 29-ಜನವರಿ-2026 ಬೆಳಿಗ್ಗೆ 09 ಗಂಟೆಯೊಳಗೆ ಆಕ್ಷೇಪಣೆ ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಸಲ್ಲಿಸಬಹುದಾಗಿದೆ.
ಆಕ್ಷೇಪಣೆ ಸಲ್ಲಿಸಲು ಪ್ರತಿ ಆಕ್ಷೇಪಣೆಗೆ ರೂ.25 ರಂತೆ ಪಾವತಿಸಬೇಕು, ಆಕ್ಷೇಪಣೆಗೆ ಪಾವತಿಸಿದ ಮೊತ್ತ ಹಿಂದಿರುಗಿಸಲಾಗುವುದಿಲ್ಲ. ಪ್ರಾಧಿಕಾರದ ಅಧಿಕೃತ ಆನ್ ಲೈನ್ ಪೋರ್ಟಲ್ https://cetonline.karnataka.gov.in/kea ಮೂಲಕ ಪತ್ರಿಕೆಗಳ ಕೀ ಉತ್ತರಗಳ ಪರಿಶೀಲನೆ ಮತ್ತು ಆಕ್ಷೇಪಣೆಗೆ ಸಲ್ಲಿಸಬಹುದು.
NABARD 2026:-ನಬಾರ್ಡ್ ಅಭಿವೃದ್ಧಿ ಸಹಾಯಕ ಹುದ್ದೆಗಳ ನೇಮಕಾತಿ 2026 – 162 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ..!
K E A 2026-ಕೆ ಇ ಎ ಪರೀಕ್ಷೆಯ ಕೀ ಉತ್ತರಗಳ ಡೌನ್ ಲೋಡ್ ಮಾಡುವ ವಿಧಾನ
- ಕೆ ಇ ಎ (K E A) ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ https://cetonline.karnataka.gov.in/kea
- ಮುಖಪುಟ ತೆರೆಯುತ್ತದೆ -> ನೇಮಕಾತಿ ವಿಭಾಗ ಕ್ಲಿಕ್ ಮಾಡಿ->ವಿವಿಧ ಇಲಾಖೆಗಳ ನೇಮಕಾತಿ-2025->ವಿವಿಧ ಇಲಾಖೆಗಳ ನೇಮಕಾತಿ- (NON-HK) 2025->ವಿವಿಧ ಇಲಾಖೆಗಳ ನೇಮಕಾತಿ- (NON-HK) 2025 ದಿನಾಂಕ25/01/2026 ರಂದು ನಡೆದ ಪರೀಕ್ಷೇಯ ತಾತ್ಕಾಲಿಕ ಕೀ ಉತ್ತರ.27/01/2026” ಲಿಂಕ್ ನ್ನು ಒತ್ತಿ, ವಿಷಯಗಳ (ಕನ್ನಡ,ಇಂಗ್ಲಿಷ್, ಕಂಪ್ಯೂಟರ್)(ಸಾಮಾನ್ಯ ಜ್ಞಾನ) ಆಧಾರಿತ ನೀಡಲಾದ ಕೀ ಉತ್ತರವಿರುವ ಪಿಡಿಎಫ್ ಅನ್ನು ಡೌನ್ ಲೋಡ್ ಮಾಡಿ ಪರಿಶೀಲನೆ ಮಾಡಿಕೊಳ್ಳಿ.
ಇನ್ನು ಹೆಚ್ಚಿನ ಮಾಹಿತಿಗೆ K E A ವೆಬ್ ಸೈಟ್ ಗೆ ಭೇಟಿ ನೀಡಿ ಸಂಪೂರ್ಣ ವಿವರ ಪಡೆಯಿರಿ.