KSWDC Loan Schemes Karnataka-2025 ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ರೂ.30,000 -ರೂ.1.50 ಲಕ್ಷದವರೆಗೆ ನೆರವು ಮತ್ತುರೂ. 3 ಲಕ್ಷಗಳ ವರೆಗೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಿದೆ.
KSWDC Loan Schemes– ರಾಜ್ಯ ಸರ್ಕಾರವು ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆಗೆ ಕೈಗೊಂಡು ಸ್ವಯಂ ಉದ್ಯೋಗಿಗಳಾಗಳು ಸುವರ್ಣ ಅವಕಾಶ ಒದಗಿಸಿದೆ.
ಕರ್ನಾಟಕ ಸರ್ಕಾರವು ಮಹಿಳೆಯರ ಸ್ವವಾಲಂಬಿ ಜೀವನವನ್ನು ನಡೆಸಲು ಹಾಗೂ ಕುಟುಂಬದ ಆರ್ಥಿಕತೆ ಬಲಪಡಿಸಲು ವಿವಿಧ ರೀತಿಯ ಸಾಲ ಸೌಲಭ್ಯಗಳು ಹಾಗೂ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತದೆ.
ಅದೇ ರೀತಿಯಾಗಿ ಜನರ ಜೀವನ ಮಟ್ಟ ವೃದ್ಧಿಯಾಗಲು ವಿವಿಧ ಇಲಾಖೆಗಳಲ್ಲಿಆರ್ಥಿಕ ಸಹಾಯದ ಮೂಲಕ ವೃತ್ತಿ ಪರ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತಮ ಅವಕಾಶವನ್ನು ಕಲ್ಪಿಸಿದೆ. ಕರ್ನಾಟಕ ಸರ್ಕಾರದಿಂದ ವಿವಿಧ ಯೋಜನೆಗಳು ಅವುಗಳೆಂದರೆ:- ಉದ್ಯೋಗಿನಿ ಯೋಜನೆ , ಚೇತನ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಮಾಜಿ ದೇವದಾಸಿ ಮಹಿಳೆಯ ಪುನರ್ವಸತಿತ ಯೋಜನೆ ಸೇರಿದಂತೆ ಮಹತ್ವದ ಈ ಯೋಜನೆಗಳಡಿ ರೂ,30,000/- ದಿಂದ ರೂ,150,000/- ನೇರ ಸಹಾಯಧನ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ.
ಅರ್ಜಿ ಸಲ್ಲಿಸಲು ಕಡೆ ದಿನಾಂಕ:– 15-ಡಿಸೆಂಬರ್-2025 .! ಆಗಿರುತ್ತದೆ.
ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಮಹಿಳಾ ಆರ್ಥಿಕ ಚಟುವಟಿಕೆ ಸಬಲೀಕರಣಕ್ಕೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC) ಮಹಿಳೆಯರಿಗೆ ಉತ್ತಮ ಅವಕಾಶ ನೀಡಿದೆ.
ಈ ಯೋಜನೆಯ ಉದ್ದೇಶ:-
ಸ್ವಂತ ವ್ಯಾಪಾರ ಮಾಡುವವರು, ಸಣ್ಣ ಅಂಗಡಿ ತೆರೆಯುವರು, ಬೀದಿ ವ್ಯಪಾರಿಗಳು, ಕುಟೀರ ಕೈಗಾರಿಕೆ ಆರಂಭಕ್ಕೆ, ಯಾವುದೆ ಸ್ವಯಂ ಉದ್ಯೋಗ ಕೈಗೊಳ್ಳಲು, ಆದಾಯ ಗಳಿಸುವ ಚಟುವಟಿಕೆ ಆರಂಭಿಸಬೇಕು ಎಂದು ಕನಸು ಕಾಣುತ್ತಿರುವ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಯರಿಗೆ ಈ ಯೋಜನೆಗಳು ದೊಡ್ಡ ಬೆಂಬಲವಾಗಿವೆ.
2025-26 ನೇ ಸಾಲಿನ ನಿಗಮದ ಈ ಕೆಳಕಂಡ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
1) ಉದ್ಯೋಗಿನಿ ಯೋಜನೆ:-ಈ ಯೋಜನೆಯು ಮಹಿಳೆಯರಿಗೆ ಸ್ವಾವಲಂಬನೆಗೆ ಬುನಾದಿ (KSWDC Loan Schemes)
ನೀವು ಸಣ್ಣ ವ್ಯಾಪಾರ , ಅಂಗಡಿ, , ಆಹಾರ ಸಂಸ್ಕರಣೆ, ಕೇ ಮಗ್ಗ, ಬ್ಯೂಟಿ ಪಾರ್ಲರ್, ವಿವಿಧ ಬಗೆಯ ವ್ಯಾಪಾರ ಚಟುವಟಿಕೆ ಆರಂಬಿಸಲು ಈ ಯೋಜನೆ ಯಾಗಿದೆ ಸದುಪಯೋಗ ಪಡಿಸಿಕೊಳ್ಳಿ, ಮಹಿಳೆಯರು ಸ್ವಯಂ ಉದ್ಯೋಗಿಗಳಾಗಳು ಬ್ಯಾಂಕಿನ ಮೂಲಕ ಸಾಲ ಒದಗಿಸುತ್ತದೆ ಹಾಗು ನಿಗಮಗಳ ಮೂಲಕ ಪ್ರೋತ್ಸಹಧನ ನೀಡಲಾಗುತ್ತದೆ.
ಎಸ್ ಸಿ / ಎಸ್ ಟಿ ಫಲಾನುಭವಿಗಳಿಗೆ:- ಆದಾಯ ಮಿತಿ: ರೂ, 2.00 ಲಕ್ಷಗಳು
ಘಟಕ ವೆಚ್ಚ:- ರೂ 1.00 ಲಕ್ಷದಿಂದ ಗರಿಷ್ಟ ರೂ 3.00 ಲಕ್ಷಗಳವರೆಗೆ
ಸಹಾಯಧನ: 50% ರಷ್ಟು (ಗರಿಷ್ಟ ರೂ. 1.50 ಲಕ್ಷ).
ಸಾಮಾನ್ಯ ವರ್ಗದ ಫಲಾನುಭವಿಗಳು:-ಆದಾಯ ಮಿತಿ: ರೂ, 1.50. ಲಕ್ಷಗಳು
ಘಟಕ ವೆಚ್ಚ:- ಗರಿಷ್ಟ ರೂ 3.00 ಲಕ್ಷಗಳವರೆಗೆ
ಸಹಾಯಧನ: 30% ರಷ್ಟು (ರೂ 90000 ಸಾವಿರಗಳು)
ವಯಸ್ಸು:- 18-55 ವರ್ಷಗಳ ಒಳಗೆ.
2)ಚೇತನ ಯೋಜನೆ :-ಹಿಂಸೆಗೊಳಗಾದ ಮಹಿಳೆಗೆ ಜೀವನ ನಡೆಸಲು (KSWDC Loan Schemes)
ಹಿಂಸೆಗೊಳಗಾದ ಮಹಿಳೆಯರಿಗೆ ದಮನಿತ ದೌರ್ಜನ್ಯ ಹಿಂಸೆ ಅನುಭವಿಸಿದ ಮಹಿಳೆಯರಿಗೆ ಕರ್ನಟಕ ಸರ್ಕಾರದಿಂದ ರೂ. 30,000/- ನೇರ ಸಹಾಯಧನ ನೀಡುತ್ತದೆ.ಮಕ್ಕಳ ಶಿಕ್ಷಣಕ್ಕೆ ,ಆದಾಯೋತ್ಪನ್ನ ಚಟುವಟಿಕೆ , ಪ್ರಾರಂಭಿಸಲು ಬಳಸಿಕೊಳ್ಳಬಹುದು. ಈ ಮಹಿಳೆಯರು ಹಿಂಸೆಗೊಳಗಾದ ಸಾಕ್ಷಾಗಳು ಬೇಕು.
ವಯಸ್ಸು:- 18 ವರ್ಷ ಮೇಲ್ಪಟ್ಟ ಮಹಿಳಾ ಫಲಾನುಭವಿಗಳು
3) ಧನಶ್ರೀ ಯೋಜನೆ:- ಸಾಮಾನ್ಯ ಮಹಿಳಾ ಫಲಾನುಭವಿಗಳಿಗೆ (KSWDC Loan Schemes)
ಸಾಮಾನ್ಯ ಮಹಿಳಾ ಫಲಾನುಭವಿಗಳಿಗೆ ತರಕಾರಿ ವ್ಯಪಾರ, ಸ್ವಂತ ಉದ್ಯೋಗ ಆರಂಭಿಸಲು ರೂ, 30000/- ಪ್ರೋತ್ಸಹಧನ ನೀಡಲಾಗುತ್ತದೆ.
ವಯಸ್ಸು:- 18 ರಿಂದ 60 ವರ್ಷಗಳು ಮಹಿಳಾ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
( ಈ ಯೋಜನೆಯ ಅರ್ಜಿಯನ್ನು ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಸಲ್ಲಿಸಬಹುದು)
4) ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:- ಟ್ರಾನ್ಸಜೆಂಡರ್ ಸಹೋದರ -ಸಹೋದರಿಯರು (KSWDC Loan Schemes)
ಸಮಾಜದಲ್ಲಿ ತಾರತಮ್ಯ ಎದುರಿಸುತ್ತಿರುವ ಟ್ರಾನ್ಸಜೆಂಡರ್ ವ್ಯಕ್ತಿಗಳಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ,30000/- ಪ್ರೋತ್ಸಹಧನ ನೀಡಲಾಗುತ್ತದೆ.
(ಈ ಯೋಜನೆಯ ಅರ್ಜಿಯನ್ನು ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಸಲ್ಲಿಸಬಹುದು)
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಈ ಯೋಜನೆ ಕಡಿಮೆ ಆದಾಯದ ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವ ಜೊತೆಗೆ, ಮಹಿಳೆಯರನ್ನು ಸ್ವತಂತ್ರರು, ಆತ್ಮವಿಶ್ವಾಸಿಗಳು ಮತ್ತು ಆರ್ಥಿಕವಾಗಿ ಸಬಲರಾಗಲು ಪ್ರೇರೇಪಿಸುತ್ತದೆ.
ಅದರ ಜೊತೆಗೆ, ಜೀವನಪರ್ಯಂತ ಮುಂದುವರಿಯಬಹುದಾದ ಸುಸ್ಥಿರ ಆದಾಯದ ಮೂಲವನ್ನೂ ಒದಗಿಸುತ್ತದೆ.
ಈ ವಿವಿಧ ಯೋಜನೆಗಳು ಕೇವಲ ಸಾಧನ ಒದಗಿಸುವಿಕೆಯಲ್ಲಿ ನಿಲ್ಲುವುದಿಲ್ಲ. ಮಹಿಳೆಯರಿಗೆ ಕೌಶಲ್ಯ ತರಬೇತಿ, ವ್ಯವಹಾರ ಮಾರ್ಗದರ್ಶನ ಮತ್ತು ಮಾರ್ಕೆಟಿಂಗ್ ಸಹಾಯವನ್ನು ಒದಗಿಸುವ ಮೂಲಕ ಸಂಪೂರ್ಣ ಬೆಂಬಲ ನೀಡಲಾಗುತ್ತದೆ.
ಈ ಯೋಜನೆಗಳು ಮಹಿಳೆಯರಿಗೆ ಏಕೆ ಮುಖ್ಯ? ಉತ್ತಮ ಉದಾಹರಣೆ ಎಂದರೆ
ಬಹುತೆಕ ಮನೆಗಳಲ್ಲಿ ಮಹಿಳೆಯರಿಗೆ ಮೂಲಭೂತ ಹೊಲಿಗೆ ಕೌಶಲ್ಯಗಳಿದ್ದರೂ, ತಮ್ಮದೇ ಟೈಲರಿಂಗ್ ವ್ಯವಹಾರವನ್ನು ಪ್ರಾರಂಭಿಸಲು ಅಗತ್ಯವಾದ ಆರ್ಥಿಕ ಸಂಪನ್ಮೂಲಗಳ ಕೊರತೆ ಎದುರಾಗುತ್ತದೆ.
ಉದ್ಯೋಗಿನಿ ಯೋಜನೆ , ಚೇತನ ಯೋಜನೆ, ಧನಶ್ರೀ ಯೋಜನೆ ಇಂತಹ ಮಹಿಳೆಯರಿಗೆ ಅತ್ಯಂತ ಮಹತ್ವದ ಸಹಾಯವಾಗುತ್ತದೆ.
ಈ ಯೋಜನೆ ಮೂಲಕ, ಅವರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಬೇಕಾದ ಪ್ರಮುಖ ಸಾಧನ — ಹೊಲಿಗೆ ಯಂತ್ರ —ವನ್ನು ಪಡೆಯುತ್ತಾರೆ.
ಇದು ಅವರಿಗೆ ಸ್ವಾವಲಂಬನೆ, ಆದಾಯದ ಅವಕಾಶ ಮತ್ತು ದೀರ್ಘಕಾಲದ ಆರ್ಥಿಕ ಪ್ರಗತಿಯ ದಾರಿ ತೆರೆದಿಡುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:- ಅರ್ಜಿ ಸಲ್ಲಿಸುವುದು ತುಂಬಾ ಸುಲಭ (KSWDC Loan Schemes)
ಆನ್ ಲೈನ್ ಅರ್ಜಿ:- ಸೇವಾ ಸಿಂದು ಪೋರ್ಟಲ್ ನಲ್ಲಿ (ಹತ್ತಿರದ ಗ್ರಾಮ ಒನ್ ಕೇದ್ರ, ಬೆಂಗಳೂರು ಒನ್ , ಬಾಪೂಜಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು)
ಆಫ್ ಲೈನ್ ಅರ್ಜಿ:- ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಭಿವೃದ್ಧಿ ನೀರಿಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸುವುದು,
Last Date Of KSWDC Loan Schemes Online Application Form =2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 15/12/2025 ಸಂಜೆ 5:30 ರ ಗಂಟೆಯ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಬೇಕಾಗುವ ದಾಖಲೆಗಳು:-
- ಅರ್ಜಿದಾರರ ಆಧಾರ್ ಕಾರ್ಡ ಬ್ಯಾಂಕ್ ಖಾತೆಗೆ ಲಿಂಕ್ ಇರಬೇಕು (ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು)
- ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಮೊದಲ ಪುಟದ ಜೆರಾಕ್ಸ ಕಾಪಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಾಸ್ ಪೊರ್ಟ ಸೈಜ್ ಪೋಟೋ 2
- ಉದ್ಯೋಗಿನಿ ಯೋಜನೆಗೆ ವ್ಯಾಪಾರ ಪ್ರಾಜೆಕ್ಟ್ ರಿಪೊರ್ಟ ಹೊಂದಿರಬೇಕು .
ಮುಖ್ಯ ವಿಷಯ ಗಮನಿಸಿ:- ಆಧಾರ್ ಸೀಡಿಂಗ್ ಇಲ್ಲದಿದ್ದರೆ ಅರ್ಜಿ ತಿರಸ್ಕರಿಸಲಾಗುತ್ತದೆ.
- 2024 ರಲ್ಲಿ ಹಿಂದಿನ ವರ್ಷ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಹಾಕಬೇಕಿಲ್ಲ.
- ಅರ್ಜಿ ಹಾಕಲು ಯಾವುದೆ ದಲ್ಲಾಳಿ ಏಜಂಟರಿಗೆ ಹಣ ಕೊಡಬೇಕಿಲ್ಲ.
ಆನ್ ಲೈನ್ ಅರ್ಜಿ ಸಲ್ಲಿಸಲು ಅಂದು ಇಂದು ಎನ್ನದೆ ಇವತ್ತೆ ತಪ್ಪದೆ ಭೇಟಿ ನೀಡಿ ನಿಮ್ಮ ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರ , ಬೆಂಗಳೂರು ಒನ್ ಸೇವಾ ಕೇಂದ್ರ , ಗ್ರಾಮ ಪಂಚಾಯಿತಿಯ ಬಾಪಾಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಕರ್ನಾಟಕ ರಾಜ್ಯ ಸರ್ಕಾರದ ಸೌಲಭ್ಯ ಪಡೆಯಿರಿ.
.