Join WhatsApp Group Join Telegram Group

Ration card Correction:-ಪಡಿತರ ಚೀಟಿ ತಿದ್ದುಪಡಿಗೆ  ಅವಕಾಶವನ್ನು 31-ಮಾರ್ಚ್-2026‌ ರ ವರೆಗೆ ನೀಡಿದೆ..!

Ration card Correction:-ಪಡಿತರ ಚೀಟಿ ತಿದ್ದುಪಡಿಗೆ  ಅವಕಾಶವನ್ನು 31-ಮಾರ್ಚ್-2026‌ ರ ವರೆಗೆ ನೀಡಿದೆ..!

ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿ ತಿದ್ದುಪಡಿಗೆ ಕಾಲಾವಕಾಶ ನೀಡಿದ್ದು, ರೇಷನ್‌ ಕಾರ್ಡ ಹೊಂದಿರುವ ಕುಟುಂಬದಲ್ಲಿ ಹೊಸ ಮಗುವಿನ ಹೆಸರು ಪಡಿತರ ಚೀಟಿಗೆ ಸೇರಿಲ್ಲವೆ? ಅಥವಾ ಮದುವೆಯಾಗಿ ಮನೆಗೆ ಬಂದ ನಿಮ್ಮ ಸೊಸೆಯ ಹೆಸರು ಸೇರಿಲ್ಲವೆ? ಹೌದ ಹಾಗಾದರೆ ಇದು ನಿಮಗೆ ಮುಖ್ಯವಾದ ಮಾಹಿತಿಯಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿ ತಿದ್ದುಪಡಿಗೆ,ಹೆಸರು ಸೇರ್ಪಡೆಗೆ,ವಿಳಾಸ ಬದಲಾವಣೆಗೆ,ಯಜಮಾನಿ ಬದಲಾವಣೆಗೆ ಇನ್ನು ಮುಂತಾದ ಸೌಲಭ್ಯವನ್ನು ಪಡೆಯಬಹುದಾಗಿದೆ. ಲಕ್ಷಾಂತರ ಕುಟುಂಬಗಳು ಸರ್ಕಾರದ ವಿವಿಧ ಯೋಜನೆ ಪಡೆಯಲು ರೇಷನ್‌ ಕಾರ್ಡ ಅವಶ್ಯಕತೆ ಇದ್ದು ಪಡಿತರ ಚೀಟಿ ಇಲ್ಲದೆ ವಂಚಿತರಾಗುತ್ತಾರೆ, ಆದ್ದರಿಂದ ಈ ಅವಕಾಶವನ್ನುಕರ್ನಾಟಕ ರಾಜ್ಯ ಸರ್ಕಾರವು ನೀಡಿದೆ. ಕುಟುಂಬದ ವಿವರವನ್ನು ನವೀಕರಿಸಲು ಹಾಗು ಭವಿಷ್ಯದಲ್ಲಿ ಆಗುವ ಸಮಸ್ಯೆಯಿಂದ ತಪ್ಪಿಸಲು ಈ ಅವಕಾಶ ನೀಡಿದೆ.

ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿ ತಿದ್ದುಪಡಿಗೆ ಈ ಹಿಂದಿನ ದಿನಗಳಲ್ಲಿ ಹೆದುರಿಸಿದ ಸರ್ವರ್‌ ಸಮಸ್ಯೆ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಹಲವಾರು ತಿಂಗಳುಗಳ ಕಾಲದವರೆಗು ರೇಷನ್‌ ಕಾರ್ಡ ತಿದ್ದುಪಡಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಕಾರಣದಿಂದ ಸಾವಿರಾರು ಜನರು ತಮ್ಮ ರೇಷನ್‌ ಕಾರ್ಡ ನಲ್ಲಿರುವ ತಮ್ಮ ಹೆಸರುಗಳ ತಿದ್ದುಪಡಿ ಸರಿಪಡಿಸಲು ತಮ್ಮ ವಿಳಾಸಗಳನ್ನು ನವೀಕರಿಸಲು ಆಗಲಿಲ್ಲ. ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು  ರೇಷನ್‌ ಕಾರ್ಡ ತಿದ್ದುಪಡಿ ಪೊರ್ಟಲ್‌ ಅನ್ನು ಸಕ್ರಿಯಗೊಳಿಸಿದೆ ಮತ್ತು ಅರ್ಹ ರೇಷನ್‌ ಕಾರ್ಡ ಕುಟುಂಬಗಳು ತಮ್ಮ ಪಡಿತರ ಚೀಟಿಯ ಮಾರ್ಪಾಡಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ನೀವು ಪಡಿತರ ಚೀಟಿಯನ್ನು ಹೊಂದಿದರೆ ಹಲವಾರು ಸರ್ಕಾರಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ, ಅವುಗಳೆಂದರೆ- ಆಹಾರ ಧಾನ್ಯಗಳನ್ನು ಪಡೆಯಲು, ವಸತಿ ಸೌಲಭ್ಯ ಪಡೆಯಲು, ಪಿಂಚಣಿ ಯೋಜನೆಗಳಿಗೆ, ಹಾಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಬಹುದು, ಇನ್ನು ಅನೇಕ ಸರ್ಕಾರಿ ಯೋಜನೆ ಪಡೆಯಲು ಪ್ರಮುಖ ಪಾತ್ರವಹಿಸುತ್ತದೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಲು ಪಡಿತರ ಚೀಟಿ ಅವಶ್ಯವಾಗಿದೆ. ಪಡಿತರ ಚೀಟಿ ತಿದ್ದುಪಡಿಗೆ ದಿನಾಂಕ-31-ಮಾರ್ಚ-2026 ರ ವರೆಗೆ ಅವಕಾಶವಿದೆ.

Ration card Correction-ಪಡಿತರ ಚೀಟಿಯಲ್ಲಿ ಯಾವ ಬದಲಾಣೆಗಳನ್ನು ಮಾಡಲು ಅವಕಾಶವಿದೆ?

ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿಯಲ್ಲಿ ಹಲವಾರು ತಿದ್ದುಪಡಿಗಳು ಮತ್ತು ನವೀಕರಣಗಳನ್ನು ಮಾಡಲು ಅನುಮತಿ ನೀಡಿದೆ, ಈ ಸೇವೆಯ ಮೂಲಕ ನೀವು ಈ ಕೆಳಗಿನ ಬದಲಾವಣೆಗಳನ್ನು ಮಾಡಿಸಬಹುದಾಗಿದೆ.

1) ಹೊಸ ಸದಸ್ಯರನ್ನು ಸೇರಿಸಲು

2) ಮೃತಪಟ್ಟ ಸದಸ್ಯರ ಹೆಸರು ಡೀಲಿಟ್ ಮಾಡಲು

3) ಕುಟುಂಬದ ಮುಖ್ಯಸ್ಥರ ಬದಲಾವಣೆಗೆ

4) ಆಧಾರ್‌ ಕಾರ್ಡನಲ್ಲಿ ಇರುವಂತೆ ಫೋಟೋ ಬದಲಾವಣೆಗೆ

5) ವಿಳಾಸ ಮತ್ತು ನ್ಯಾಯಬೆಲೆ ಅಂಗಡಿ ಬದಲಾವಣೆಗೆ

6) ಹೆಸರು ತಿದ್ದುಪಡಿ

1) ಹೊಸ ಸದಸ್ಯರನ್ನು ಸೇರಿಸಲು:-

 ಹೊಸ ಸದಸ್ಯರನ್ನು ಕುಟುಂಬದ ಪಡಿತರ ಚೀಟಿಗೆ ಸೇರಿಸಹುದು,

ಹೊಸದಾಗಿ ಹುಟ್ಟಿದ ಮಕ್ಕಳು:– ಇವರನ್ನು ಪಡಿತರ ಚೀಟಿಗೆ ಸೇರ್ಪಡೆಗೆ ಮಾಡಲು ಬೇಕಾದ ದಾಖಲೆ ಏನೆಂದರೆ ಜನನ ಪ್ರಮಾಣ ಪತ್ರ ಹಾಗು ಆಧಾರ್‌ ಕಾರ್ಡ ಜೊತೆಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಇರಬೇಕು ಬೇಕಾಗುತ್ತದೆ. ಜೊತೆಗೆ ತಂದೆಯ ಆಧಾರ್‌ ಕಾರ್ಡ ಮತ್ತು ರೇಷನ್‌ ಕಾರ್ಡ

ಹೊಸದಾಗಿ ಮದುವೆಯಾಗಿ ಬಂದ ಸೊಸೆ;- ಇವರನ್ನು ಪಡಿತರ ಚೀಟಿಗೆ ಸೇರ್ಪಡೆಗೆ ಮಾಡಲು ಬೇಕಾದ ದಾಖಲೆ ಏನೆಂದರೆ  ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ವಿಳಾಸ ಬದಲಾವಣೆಯಾದ ಆಧಾರ್‌ ಕಾರ್ಡ

ಹೊರಗುಳಿದ ಅರ್ಹ ಸದಸ್ಯರು

2) ಮೃತಪಟ್ಟ ಸದಸ್ಯರ ಹೆಸರು ಡೀಲಿಟ್ ಮಾಡಲು:-

ಪಡಿತರ ಚೀಟಿಯಲ್ಲಿ ಮೃತ ಪಟ್ಟವರು ಇದ್ದರೆ ಅಂತವರನ್ನು ಮರಣ ಪತ್ರ ದೊಂದಿಗೆ ತಾವುಗಳ ಬಯೋಮೆಟ್ರಿಕ್‌ ಸಹಾಯದಿಂದ ಅಂತವರನ್ನು ತೆಗೆದು ಹಾಕಬಹುದಾಗಿದೆ.

3) ಕುಟುಂಬದ ಮುಖ್ಯಸ್ಥರ ಬದಲಾವಣೆಗೆ

ಕುಟುಂಬದ ಮುಖ್ಯಸ್ಥರು ನಿಧನರಾದ ಸಂದರ್ಭಗಳಲ್ಲಿ ಅಥವಾ ನೀವು ಮಾಲೀಕತ್ವವನ್ನು ವರ್ಗಾಯಿಸಲು ಬಯಸಿದರೆ, ನೀವು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾಯಿಸಬಹುದು. ಮಹಿಳೆಯರಲ್ಲಿ ವಯಸ್ಸು ಹೆಚ್ಚಾಗಿದ್ದವರು ಕುಟುಂಬದ ಮುಖ್ಯಸ್ಥರಾಗಲು ಅರ್ಹರಾಗಿರುತ್ತಾರೆ.

4) ಆಧಾರ್‌ ಕಾರ್ಡನಲ್ಲಿ ಇರುವಂತೆ ಫೋಟೋ ಬದಲಾವಣೆಗೆ-

ಸ್ಪಷ್ಟ ಗುರುತಿನ ದಾಖಲೆಗಳನ್ನು ನಿರ್ವಹಿಸಲು ಹಳೆಯ, ಅಸ್ಪಷ್ಟ ಅಥವಾ ಹಾನಿಗೊಳಗಾದ ಛಾಯಾಚಿತ್ರಗಳನ್ನು ಹೊಸ ಫೋಟೋಗಳೊಂದಿಗೆ ಬದಲಾಯಿಸಬಹುದು ಇ ಕೆವೈಸಿ ಮಾಡುವುದರ ಮೂಲಕ .

5) ವಿಳಾಸ ಮತ್ತು ನ್ಯಾಯಬೆಲೆ ಅಂಗಡಿ ಬದಲಾವಣೆಗೆ 

ನೀವು  ಹೊಸ ಮನೆಗೆ/ ಬೇರೆ ಕಡೆ ಸ್ಥಳಾಂತರಗೊಂಡಿದ್ದರೆ ಅಥವಾ ನಿಮ್ಮ ವಾಸಸ್ಥಳವನ್ನು ಬದಲಾಯಿಸಿದ್ದರೆ, ನಿಮ್ಮ ಪಡಿತರ ಚೀಟಿ ವಿಳಾಸವನ್ನು ಅದಕ್ಕೆ ಅನುಗುಣವಾಗಿ ನವೀಕರಿಸಬಹುದು ಹಾಗು ನ್ಯಾಯಬೆಲೆ ಅಂಗಡಿಯನ್ನು ಬದಲಾಹಿಸಬಹುದು. ಆಧಾರ ಕಾರ್ಡ ನಲ್ಲಿ ಇರುವಂತೆ ಬದಲಾಹಿಸಬಹುದು.

Ration card Correction-ವಿವಿಧ ತಿದ್ದುಪಡಿಗಳಿಗೆ ಅಗತ್ಯವಿರುವ ದಾಖಲೆಗಳು

ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೊದಲು, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸರಿಯಾದ ದಾಖಲೆಗಳನ್ನು ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳಿ.

6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ

  • ಮಗುವಿನ ಜನನ ಪ್ರಮಾಣಪತ್ರ

  • ಇಬ್ಬರೂ ಪೋಷಕರ ಆಧಾರ್ ಕಾರ್ಡ್

  • ಆಧಾರ್‌ ಸಂಖ್ಯೆಗೆ ಮೊಬೈಲ್‌ ನಂಬರ್‌ ಲಿಂಕ್‌ ಇರಬೇಕು

6 ವರ್ಷ ಮೇಲ್ಪಟ್ಟ ಕುಟುಂಬ ಸದಸ್ಯರಿಗೆ

  • ಆಧಾರ್ ಕಾರ್ಡ್

  • ಜಾತಿ ಪ್ರಮಾಣಪತ್ರ

  • ಆದಾಯ ಪ್ರಮಾಣಪತ್ರ

ವಿವಾಹಿತ ಮಹಿಳೆಯರಿಗೆ

  • ಮದುವೆ ಪ್ರಮಾಣಪತ್ರ

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಹಿಂದಿನ ಪಡಿತರ ಚೀಟಿಯಿಂದ ಅಳಿಸುವಿಕೆ ಪ್ರಮಾಣಪತ್ರ

ವಿಳಂಬವನ್ನು ತಪ್ಪಿಸಲು ಯಾವಾಗಲೂ ಮೂಲ ದಾಖಲೆಗಳು ಮತ್ತು ನಕಲು ಪ್ರತಿಗಳನ್ನು ಕೊಂಡೊಯ್ಯಿರಿ.

ಪಡಿತರ ಚೀಟಿ ತಿದ್ದುಪಡಿಗೆ ನೀವು ಎಲ್ಲಿ ಅರ್ಜಿ ಸಲ್ಲಿಸಬಹುದು?

ಕರ್ನಾಟಕ ಸರ್ಕಾರವು ಈ ಕೆಳಗಿನ ಅಧಿಕೃತ ಕೇಂದ್ರಗಳ ಮೂಲಕ ತಿದ್ದುಪಡಿ ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡಿದೆ:

  • ಗ್ರಾಮ ಒನ್ ಕೇಂದ್ರಗಳು

  • ಬೆಂಗಳೂರು ಒನ್ / ಕರ್ನಾಟಕ ಒನ್ ಕೇಂದ್ರಗಳು

ಅರ್ಜಿದಾರರಿಗೆ ಪ್ರಮುಖ ಸೂಚನೆಗಳು

ಆಧಾರ್ ಲಿಂಕ್ ಕಡ್ಡಾಯ

ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ OTP ಪರಿಶೀಲನೆ ಅಗತ್ಯವಿರುವುದರಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು.

ಕೇಂದ್ರಗಳಿಗೆ ಮುಂಚಿತವಾಗಿ ಭೇಟಿ ನೀಡಿ

ಭಾರೀ ಜನಸಂದಣಿ ಮತ್ತು ಸರ್ವರ್ ಲೋಡ್ ಇರುವುದರಿಂದ, ವಿಳಂಬವನ್ನು ತಪ್ಪಿಸಲು ಬೆಳಿಗ್ಗೆ ಬೇಗನೆ ಕೇಂದ್ರಗಳಿಗೆ ಭೇಟಿ ನೀಡುವುದು ಸೂಕ್ತ.

ಸ್ವೀಕೃತಿ ರಶೀದಿಯನ್ನು ಸುರಕ್ಷಿತವಾಗಿರಿಸಿ

ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ನೀವು ಉಲ್ಲೇಖ ಸಂಖ್ಯೆಯನ್ನು ಹೊಂದಿರುವ ಸ್ವೀಕೃತಿ ರಶೀದಿಯನ್ನು ಸ್ವೀಕರಿಸುತ್ತೀರಿ. ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಈ ಸಂಖ್ಯೆ ನಿರ್ಣಾಯಕವಾಗಿದೆ. ರಶೀದಿಯನ್ನು ಆಹಾರ ಇಲಾಖೆ ಆಫಿಸರ್ಗೆ ಏಳು ದಿನದೊಳಗೆ ಅರ್ಜಿಯನ್ನು ಸಲ್ಲಿಸಬೇಕು.

Ration card Correction-ಪಡಿತರ ಚೀಟಿ ಏಕೆ ಈಗ ಹೆಚ್ಚು ಮುಖ್ಯವಾಗಿದೆ

ಇಂದು ಪಡಿತರ ಚೀಟಿ ಸಬ್ಸಿಡಿ ಅಕ್ಕಿ ಮತ್ತು ಆಹಾರ ಧಾನ್ಯಗಳನ್ನು ಪಡೆಯುವುದಕ್ಕೆ ಸೀಮಿತವಾಗಿಲ್ಲ. ಇದು ಈ ಕೆಳಗಿನವುಗಳಿಗೆ ಪ್ರವೇಶ ದ್ವಾರ ದಾಖಲೆಯಾಗಿದೆ:

  • ಗೃಹಲಕ್ಷ್ಮಿ ಯೋಜನೆ

  • ಅನ್ನ ಭಾಗ್ಯ ಯೋಜನೆ

  • ಉಚಿತ ಪಡಿತರ ವಿತರಣೆ

  • ವೃದ್ಧಾಪ್ಯ ಮತ್ತು ವಿಧವಾ ಪಿಂಚಣಿ

  • ವಸತಿ ಮತ್ತು ಸಾಲ ಸಬ್ಸಿಡಿ ಯೋಜನೆಗಳು

  • ಶಾಲಾ ವಿದ್ಯಾರ್ಥಿವೇತನ ಕಾರ್ಯಕ್ರಮಗಳು

ನಿಮ್ಮ ಪಡಿತರ ಚೀಟಿಯಲ್ಲಿನ ಯಾವುದೇ ದೋಷವು ಈ ಯೋಜನೆಗಳಿಂದ ತಿರಸ್ಕೃತಗೊಳ್ಳಲು ಕಾರಣವಾಗಬಹುದು.

Ration card Correction-ಹೆಚ್ಚಿನ ಮಾಹಿತಿಗೆ ಹತ್ತಿರದ ಗ್ರಾಮ ಒನ್‌ ಕೇಂದ್ರಕ್ಕೆ ಭೇಟಿ ನೀಡಿ ಬೆಂಗಳೂರು ಒನ್ / ಕರ್ನಾಟಕ ಒನ್ ಕೇಂದ್ರಗಳು

Leave a Comment